Saturday, February 12, 2011

ಕಾರಂತರ ಕಾದಂಬರಿಗಳ ಮರು ಓದು.


ಶಿವರಾಮ ಕಾರಂತ ಬಾಲವನ ಸಮಿತಿ ,ಅನಿಕೇತನ ಎಜುಕೇಶನ್ ಟ್ರಸ್ಟ್ , ಕನ್ನಡ ಸಂಘ ಇನ್ದುಸ್ ಕಾಲೇಜು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬಾಲವನದಲ್ಲಿ ಕಾರಂತರ ಕಾದಂಬರಿಗಳ ಮರು ಓದು ಎಂಬ ಒಂದು ದಿನದ ವಿಚಾರ ಸಂಕಿರಣವು ಜರಗಿತು. ಕಾರ್ಯಕ್ರಮವನ್ನು ಮಂಗಳೂರು ವಿವಿ ಉಪಕುಲಸಚಿವರಾದ ಪ್ರಭಾಕರ ನೀರ್ ಮಾರ್ಗ ಉದ್ಘಾಟಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸವಣೂರು ಸೀತಾರಾಮ ರೈ ಯವರು ವಹಿಸಿದ್ದರು. ವಿಕಾಸದ ಅದ್ಯಕ್ಷರಾದ ಕೃಷ್ಣ ಮೂರ್ತಿ ಮುಖ್ಯ ಅತಿಥಿ ಯಾಗಿದ್ದರು. ಅನಿಕೇತನ ಎಜುಕೇಶನ್ ಟ್ರಸ್ಟ್ ನ ಕೃಷ್ಣ ಪ್ರಸಾದ್ ನಡ್ಸಾರ್ ಸ್ವಾಗತಿಸಿ , ಇಂಡಸ್ ಕಾಲೇಜು ಪ್ರಾಂಶು ಪಾಲರಾದ ಸೀತಾರಾಮ ಕೇವಳ ವಂದಿಸಿದರು. ಬಳಿಕ ನಡೆದ ವಿಚಾರಸಂಕಿರಣದಲ್ಲಿ ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ಕನ್ನಡ ಉಪನ್ಯಾಸಕರಾದ ರಮೇಶ್ ಭಟ್ ಚೋಮನ ದುಡಿ ಕಾದಂಬರಿಯ ಕುರಿತು ಹಾಗು ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ನವೀನ್ ಕುಮಾರ್ ಮರಿಕೆ ಯವರು ಬೆಟ್ಟದ ಜೀವ ಕಾದಂಬರಿಯ ಕುರಿತು ವಿಚಾರ ಮಂಡಿಸಿದರು . ನಿವೃತ್ತ ಪ್ರಾಧ್ಯಾಪಕರಾದ ಹರಿನಾರಾಯಣ್ ಮಾಡಾವು ಸಮನ್ವಯಕಾರರಾಗಿದ್ದರು. ರಂಗಕರ್ಮಿ ಇ ಕೆ ಬೊಳುವಾರು , ಪ್ರಭಾಕರ್, ಬಿಜೆ ಸುವರ್ಣ , ಪರಮೇಶ್ವರ ಭಟ್ ಸಂವಾದದಲ್ಲಿ ಭಾಗವಹಿಸಿದರು. ಕನ್ನಡ ಉಪನ್ಯಾಸಕ ರಾಜೇಶ್ ಬೆಜ್ಜಂಗಳ ಗೋಷ್ಠಿಯನ್ನು ನಿರ್ವಹಿಸಿದರು.

Saturday, December 18, 2010

ವರ್ಷದ ಕೊನೆಯಲ್ಲಿ.....

 ಇದೀಗ 2010 ಮರೆಯಾಗಲು ದಿನಗಣನೆ ಆರಂಭವಾಗಿದೆ. 2011 ಕೆಲವೇ ದಿನಗಳಲ್ಲಿ ದಿನಾಂಕದ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ. ಮುಂದಿನ ೩೬೫ ದಿನಗಳಲ್ಲಿ ದಿನಂಪ್ರತಿ ಒಂದೊಂದೆ ಹೆಚ್ಚಾಗುತ್ತಾ ಸಾಗಲಿದೆ. ದಶಂಬರ ಹೊತ್ತಿಗೆ ಮತ್ತೆ ಇದೆ ಮನೋಭಾವ. ಹೌದು ಕಾಲ ಬದಲಾಗಲೇ ಬೇಕು. ಮನುಷ್ಯ ಅದರೊಂದಿಗೆ ಓಡಲೇ ಬೇಕು. ಸುಮ್ಮನೆ ಕುಳಿತುಕೊಂಡರು ಅದು ನಿಲ್ಲುವುದಿಲ್ಲ. ಮತ್ತೆ ಮತ್ತೆ ಓಡುತ್ತಿದೆ; ನಾವು ಹಿಂದೆ ಉಳಿದರೂ ಕೂಡಾ. ಕಳೆದ ಒಂದು ವರ್ಷದಲ್ಲಿ ನಾವು ಏನು ಸಾಧಿಸಿದ್ದೇವೆ ಎಂದು ಪಕ್ಷಿನೋಟ ಬೀರಲು ಇದೊಂದು ಸುಗಮಕಾಲ . ಮುಂದೆ ಏನು ಮಾಡಬೇಕೆಂದು ಯೋಚಿಸಲು ಕೂಡಾ. ಇಡೀ ಭಾರತ ಪ್ರಕಾಶಿಸುತ್ತಿದೆ ಎಂದು ನಾವು ಎದೆತಟ್ಟಿ ಕೂಗಾಡುತ್ತಿರುವಾಗ, ಅಂಕೆಯಿಲ್ಲದ ನಾಲಗೆ, ಜೀವಂತಿಕೆಯಿಲ್ಲದ ಮುಖ , ಅಂತರಾತ್ಮ ವಿಲ್ಲದ ದೇಹ, ನಾಚಿಕೆಯಿಲ್ಲದ ಮನೋಭಾವ ಹೊತ್ತ ಕಳಪೆ ಸಾಮಾಗ್ರಿ ಯಂತಿರುವ ರಾಜಕಾರಣಿಗಳು ಮಾಡುವ ಅನಾಚಾರ ವನ್ನು ಕಂಡು ರೋಸಿಹೋಗುತ್ತಿದ್ದೇವೆ. ೧೨೦ ಕೋಟಿ ಜನರನ್ನು ಕೋಡಂಗಿ ಗಳಾಗಿಸುತ್ತಾ , ಬಹುಕೋಟಿ ಜನರ ತಾಳ್ಮೆಯ ಮೇಲೆ ಕುಣಿದಾಡುವ ಇವರಿಗೆ ಈ ಧೈರ್ಯ ಕೊಟ್ಟವರಾರು? ನಾವು ತಾನೇ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಆಟ ಎಂದಿಗೂ ನಮ್ಮ ರಾಜ ಆಗಲು ಸಾಧ್ಯವಿಲ್ಲ. ನಮ್ಮನು ಬೇಕಾಬಿಟ್ಟಿ ಕುಣಿಸಲು ಸಾಧ್ಯವಿಲ್ಲ. ಆದರೆ ಮಾಡೋದು ಏನು.ಅವರ ಕೃಪಾಕಟಾಕ್ಷ ಇಲ್ಲದೆ ಹುಲ್ಲು ಕಡ್ಡಿ ಮುಂದೆ ಸಾಗದ ಪರಿಸ್ತಿತಿ ನಿರ್ಮಾಣ ವಾಗಿದೆ.

ಅಮೇರಿಕ , ಚೀನಾ ಸೇರಿದಂತೆ ದೊಡ್ಡ ರಾಷ್ಟ್ರಗಳು ನಮ್ಮ ನಾಯಕತ್ವವನ್ನು ಒಪ್ಪಿ ವಿಶ್ವ ಸಮುದಾಯದಲ್ಲಿ , ನಮಗೊಂದು ಸ್ಥಾನ ನೀಡಲು ಉತ್ಸುಕರಾಗಿರುವಾಗ ನಾವು ಹಗರಣಗಳ ಸರಮಾಲೆಯನ್ನು ಧರಿಸುತ್ತಾ , ಕೆಲವರು ಹೇಳಿದ ಪುಂಗಿ ಮಾತುಗಳನ್ನೇ ನೆಕ್ಕಿ ಸಭೆ ಸಮಾರಂಭಗಳಲ್ಲಿ ಕಕ್ಕಿ ಚಪ್ಪಾಳೆ ಗಿಟ್ಟಿಸಿ ಅದನ್ನೇ ಬೆಳಗಿಸುವ ಮಾದ್ಯಮಗಳ ಮುಖಪುಟದಲ್ಲಿ ನಗುಮಿಕದ ಚಿತ್ರ ದೊಂದಿಗೆ ನ ಯಕ್ಕ ರಾಗುತ್ತಿದ್ದೇವೆ. ಅಂಥವರ ಹುಳುಕುಗಳನ್ನು ಬರೆದು ಪ್ರಜಾಪ್ರಭುತ್ವದ ಮಾನ ಕಾಪಾಡಲು ಪಣ ತೊಟ್ಟವರೂ ಕೂಡಾ ಮಣ್ಣು ಹೊನ್ನಿನ ರಾಶಿಯಲ್ಲಿ ಮಾಯವಾಗಿದ್ದಾರೆ.

ಇರಲಿ. ಇಂಥವರೇ ಭಾರತವಲ್ಲ; ವಿಶ್ವವೂ ಅಲ್ಲ. ಅಲ್ಲಿ ಮತ್ತೆ ಕೋಟ್ಯಾಂತರ ಮಂದಿ ಉತ್ತಮ ಚಿಂತಕರಿದ್ದಾರೆ; ಯೋಚನೆಮಾದುವವರಿದ್ದಾರೆ. ಯಾರೋ ಏನೋ ಮಾಡಿದ್ದಾರೆ ಎಂದು ಅವರ ಬಾಲ ಹಿಡಿಯುವುದು ಬೇಡ. ೨೦೧೦ ಹಗರಣಗಳ ವರ್ಷವಾದರೆ ೨೦೧೧ ಸಾಧನೆಯ ವರ್ಷವಾಗಲೀ. ಭಾರತದ ಮೇಲಿರುವ ವಿಶ್ವದ ಭರವಸೆ ನನಸಾಗಲು ನಾವೆಲ್ಲಾ ಪ್ರಯತ್ನಿಸೋಣ. ಅದಕ್ಕೆ ಈ ಕಳಪೆ ಸಾಮಾಗ್ರಿ ಬೇಡ. ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲ ನಮ್ಮಲಿದೆ.

Sunday, February 8, 2009

ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಬರವಣಿಗೆ
ಶೈಕ್ಷಣಿಕ ರೀತಿ ಬದಲಾಗುತ್ತಿದೆ. ಓದುವ ಹವ್ಯಾಸ ಕಡಿಮೆಯಗುತ್ತಿರುವಂತೆ ಬರವಣಿಗೆಯೂ ಅವರಿಂದ ದೂರ ಹೋಗುತ್ತಿದೆ.ಈಗಿನ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಇದು ಬಹಳ ಅನಿವಾರ್ಯ ವಾಗಿ ಬೇಕಾಗಿದೆ. ಆದರೆ ಈ ಕುರಿತು ಯೋಚನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವುದು ಕಡಿಮೆ. ಯಾಕೆಂದರೆ ಇದೆಲ್ಲ ನಮ್ಮ ಮುಂದಿನ ಜೀವನಕ್ಕೆ ಅಗತ್ಯವಿಲ್ಲವೆನ್ನುವ ಅಭಿಪ್ರಾಯ ಅವರದ್ದು. ಆದರೆ ಕೆಳ ತರಗತಿಯಲ್ಲಿ ಯಾವುದಾದರು ಕಲೆಯ ಬಗ್ಗೆ ಆಸಕ್ತಿ ಅಭಿರುಚಿ ಇದ್ದು ಅದನ್ನು ಬೆಳೆಸಿಕೊಂಡು ಬಂದವರು ಮುಂದಿನ ತರಗತಿಗಳಲ್ಲಿ ಉತ್ತಮ ರೀತಿಯಲ್ಲಿ ಸಹಕರಿಸುತ್ತಾರೆ, ತಮ್ಮ ಆಸಕ್ತಿಯನ್ನು ಮತ್ತು ಬೆಳಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾದರೆ ಅವರ ಜೀವನ ಸುಗಮವಾಗುವುದಲ್ಲದೆ ವಿದ್ಯಾಲಯ ಮತ್ತು ಮನೆಯಲ್ಲಿ ಜತೆಗೆ ಮುಂದೆ ತಾವು ಯಾವುದೋ ಕೆಲಸಕ್ಕೆ ಸೇರಿದ ಸ್ಥಳದಲ್ಲಿ ಒಳ್ಳೆಯ ರೀತಿಯಿಂದ ಇರಲು ಪ್ರಯತ್ನಿಸುತ್ತಾರೆ. ತಮ್ಮ ಮನಸಿನ ಭಾವನೆಗಳನ್ನು ಪ್ರಕಟಿಸಲು ಬರವಣಿಗೆಯನ್ನಾದರೂ ದಾರಿಯನ್ನಾಗಿ ಮಾಡಿಕೊಂಡರೆ ಎಲ್ಲೆಲ್ಲೊ ತಿರುಗುವ ಮಾನಸಿಕ ತುಮುಲಗಳನ್ನು ಸರಿಪಡಿಸಬಹುದು.

Saturday, January 31, 2009


ಇಂಡಸ್ ಕಾಲೇಜಿನಲ್ಲಿ ಚುಟುಕು ಕಾರ್ಯಾಗಾರ

ಕನ್ನಡ ಸಂಘ , ರಾಷ್ಟ್ರೀಯ ಸೇವಾ ಯೋಜನೆ ಇಂಡಸ್ ಕಾಲೇಜು ಮತ್ತು ಪುತ್ತೂರು ತಾಲೂಕು ಚುಕ್ತುಕು ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಧ್ಯಾರ್ಥಿಗಳಿಗೆ ಒಂದು ದಿನದ ಚುಟುಕು ಕಾರ್ಯಾಗಾರ ಇಂಡಸ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚುಟುಕ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಶ್ರೀ ವಿ ಬಿ ಅರ್ತಿಕಜೆಯವರು ಉಧ್ಘಾಟಿಸಿದರು . ಅವರು ಮಾತನಾಡುತ್ತ ಚುಟುಕು ನಮ್ಮ ಬದುಕಿಗೆ ಹೇಗೆ ಪ್ರೇರಕ ಎಂಬುದನ್ನು
ತಿಳಿಸಿದರು. ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯ್ರಾದ ಪಿ ಕೆ ಪರಮೇಶ್ವರ್ ಭಟ್ ಅತಿಥಿಯಾಗಿ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶು ಪಾಲರಾದ ಸೀತಾರಾಮ ಕೇವಳ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯದರ್ಶಿ ಧಿರಾಜ್ ಎನ್ ರೈ ಸ್ವಾಗತಿಸಿ ಕನ್ನಡ ಸಂಘ ಕಾರ್ಯದರ್ಶಿ ಶ್ರೀಕಾಂತ್ ಎಚ್ ಡಿ ವಂದಿಸಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು . ಭಾವಿತ್ ಕೆ ಪಿ ಮತ್ತು ಶ್ಯಾಮ್ ಪ್ರಾರ್ಥಿಸಿದರು. ಅಸ್ವಿತ ಎಚ್ ಎಸ್, ವಿಧ್ಯಾಲಕ್ಷ್ಮಿ ಭೂಮಿಕಾ, ಫತಿಮತ್ ರಜಿಯಾ ಶರತ್ ಶ್ರೀಕಾಂತ್ ಎಚ್ ಡಿ, ಭಾವಿತ್ ಕೆ ಪಿ, ಪ್ರಮಿತ್ ರಾಜ್ ,ಯಶವಂತ್ ಬಿ ಯು, ಶ್ಯಾಮ ನಾಸಿರ್ ಎಸ್,ಧಿರಾಜ್ ಎನ್ ರೈ ಕಾರ್ಯಗಾರದಲ್ಲಿ ಭಾಗವಹಿಸಿದ್ದಾರೆ.

Wednesday, October 22, 2008

ಹಳ್ಳಿಗಳು ಖಾಲಿಯಾಗುತ್ತಿವೆ.

ಮೇಲಿನ ತಲೆಬರಹದಲ್ಲಿ ೧೯-೧೦-೨೦೦೮ ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ನರೇಂದ್ರ ರೈ ದೇರ್ಲ ಬರೆದಿರುವ ಲೇಖನ ಉತ್ತಮವಿಚಾರಗಳನ್ನು ತೆರೆದಿಟ್ಟಿದೆ. ನಗರ ವ್ಯಾಮೋಹ ಎಲ್ಲಿಯವರೆಗೆ ನಮ್ಮನ್ನು ಬಿದುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹಳ್ಳಿಗಳು ಖಾಲಿಯಾಗುತ್ತಲೇ ಇರುತ್ತವೆ. ಒಂದು ಹಂತದಲ್ಲಿ ನಾವೆಲ್ಲ ಮೇಲೆ ನೋಡ ಬೇಕಾದ ಪರಿಸ್ಥಿತಿ ಬರಬಹುದು. ಹಾಗಾದರೆ ಅದನ್ನು ನಿಲ್ಲಿಸುವ ದಾರಿ ಯಾವುದು? ಯಾವುದೇ ಸರಕಾರ ರೈತರಿಗಾಗಿ ವಿವಿಧ ಪ್ಯಾಕೇಜು ಘೋಷಿಸುವಾಗ ಕೆಲವೊಂದು ವಿಚಾರಗಳನ್ನು ಗಮನಿಸ ಬೇಕಾಗಿವೆ. ಯಾವತ್ತು ರೈತನ ಕೆಲಸ ಬಹಳ ಮುಖ್ಯ ಎನ್ನುವ ವಿಚಾರ ನಮ್ಮ ಯುವಜನರಿಗೆ ಬರುವಹಾಗೆ ಮಾಡಿದ್ದಾರೆಯೇ? ಕೃಷಿ ಕ್ಷೇತ್ರದಲ್ಲಿ ಯುವಕರನ್ನು ಆಕರ್ಷಿಸಲು ಸರಕಾರದಲ್ಲಿ ಅಥವಾ ಚಿಂತಕರಲ್ಲಿ ಏನಾದರು ವಿಶೇಷ ದಾರಿಗಳಿವೆಯೇ? ಅಥವಾ ಕನಿಷ್ಠ ಉತ್ತಮ ಯುವ ಕೃಷಿಕ ಎನ್ನುವ ಪ್ರಶಸ್ತಿ ಕೊಡುತ್ತಾರೆಯೇ? ಕೃಷಿಕರ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತಿದೆಯೇ? ಇನ್ನಾದರು ಇದೊಂದು ಗಂಭೀರ ಪ್ರಶ್ನೆ ಎನ್ನುವ ಮನೋಭಾವ ನಮ್ಮ ಆಡಳಿತ ಪ್ರತಿನಿಧಿಗಳಿಗೆ ಬರಬಹುದೇ?

Sunday, October 19, 2008

ಕಾಸರಗೋಡು ಸುದ್ದಿಗಳು

ಕನ್ನಡಿಗರ ಹೋರಾಟ : ಕಾಸರಗೋಡು ಪ್ರದೇಶದಲ್ಲಿ ಕನ್ನಡ ಭಾಷೆಯ ಮೇಲೆ ವ್ಯಾಪಕ ಮಲತಾಯಿ ಧೋರಣೆ ಆಗುತ್ತಿರುವುದರ ಕುರಿತು ಕಾಸರಗೋಡು ಕನ್ನಡಿಗರು ಕಣ್ಣೀರು ಮಿಡಿಯುತ್ತಿದಾರೆ. ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಚಟುವಟಿಕೆಗಳನ್ನು ಸಹಿಸದ ಕೆಲವು ಮಂದಿ ಸೂಚನಾ ಫಲಕವನ್ನು ಹರಿಯುವುದರ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಯುವಕರೇ ನಾವೇನು ಮಾಡಬಹುದು

ಪ್ರಪಂಚ ವಿಶಾಲವಾಗಿದೆ. ಜಾಗತೀಕರಣದ ಮಧ್ಯೆಯೂ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿದೆ. ಈ ಸಮಸ್ಯೆ ಯನ್ನು ಪರಿಹರಿಸಲು ಯುವಕರಾದ ನಾವು ಬಹಳಷ್ಟು ಪ್ರಯತ್ನಿಸಬೇಕಾಗಿದೆ. ಈಗ ಯಾರಿಗೂ ಅರಿವಿನ ಕೊರತೆ ಇಲ್ಲ. ಆದರೆ ನಾವೇನು ಮಾಡುತ್ತಿದ್ದೇವೆ ಎನ್ನುವ ವಿವೇಕ ನಮಲ್ಲಿ ಇಲ್ಲ. ಆದುದರಿಂದ ಪ್ರಪಂಚ ಬೆಳೆಯುತ್ತಿರುವಂತೆ ನಾವ್ಯಾಕೆ ಹಿಂದೆ ಚಲಿಸುತ್ತಿದ್ದೇವೆ
ಎಂದು ಅರ್ಥವಾಗುತ್ತಿಲ್ಲ. ಇದನ್ನು ಪರಿಹರಿಸಲು ಯುವಕರಿಂದ ಮಾತ್ರ ಸಾಧ್ಯ. ನಾವೇನಾದರೂ ಈಗ ಪ್ರಯತ್ನ ಮಾಡದಿದ್ದರೆ ಮುಂದೆ ನಾವೇ ದುರಂತವನ್ನು ನಮ್ಮ ಮೇಲೆಯೇ ಎಳೆದುಹಾಕಿದಂತೆ . ಈ ಸಮಸ್ಯೆ ಭೀಕರವಾಗುವ ಮೊದಲು ನಾವೇನು ಮಾಡಬಹುದು?ಪ್ರತಿಯೊಬ್ಬರೂ ನಮ್ಮ ಪರಿಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಬೇಕಾಗಿದೆ. ತನ್ನ ಹಿನ್ನೆಲೆಯನ್ನು ಅರಿಯಬೇಕಾಗಿದೆ. ಹೀಗಾದರೆ ಮಾತ್ರ ನಾವೇನಾದರೂ ಈ ಸಮಾಜಕ್ಕೆ ಕೊಡುಗೆಯನ್ನು ಕೊಡಬಹುದಾಗಿದೆ. ಈ ಸುಂದರವಾದ ಭೂಮಿಯಲ್ಲಿ ನಾವು ಹುಟ್ಟಿ ನಮ್ಮ ದೇನಾದರು ಕೊಡುಗೆಯನ್ನು ಕೊಡದಿದ್ದರೆ ನಮ್ಮ ಜೀವನವೇ ಶೂನ್ಯವಾಗಬಹುದು. ನಮಗೀಗ ಬೇಕಾಗಿರುವುದು ಏನು? ಯಾವುದರ ಕೊರತೆಯಿಂದ ನಮಗೆ ಈಗ ಗೊಂದಲವಾಗಿದೆ. ಈ ಗೊಂದಲಕ್ಕೆ ಪರಿಹಾರವೇನು? ಅಭಿಪ್ರಾಯ ತಿಳಿಸುತ್ತಿರಾ?

ರಾಜೇಶ್ ಬೆಜ್ಜಂಗಳ