ಇದೀಗ 2010 ಮರೆಯಾಗಲು ದಿನಗಣನೆ ಆರಂಭವಾಗಿದೆ. 2011 ಕೆಲವೇ ದಿನಗಳಲ್ಲಿ ದಿನಾಂಕದ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ. ಮುಂದಿನ ೩೬೫ ದಿನಗಳಲ್ಲಿ ದಿನಂಪ್ರತಿ ಒಂದೊಂದೆ ಹೆಚ್ಚಾಗುತ್ತಾ ಸಾಗಲಿದೆ. ದಶಂಬರ ಹೊತ್ತಿಗೆ ಮತ್ತೆ ಇದೆ ಮನೋಭಾವ. ಹೌದು ಕಾಲ ಬದಲಾಗಲೇ ಬೇಕು. ಮನುಷ್ಯ ಅದರೊಂದಿಗೆ ಓಡಲೇ ಬೇಕು. ಸುಮ್ಮನೆ ಕುಳಿತುಕೊಂಡರು ಅದು ನಿಲ್ಲುವುದಿಲ್ಲ. ಮತ್ತೆ ಮತ್ತೆ ಓಡುತ್ತಿದೆ; ನಾವು ಹಿಂದೆ ಉಳಿದರೂ ಕೂಡಾ. ಕಳೆದ ಒಂದು ವರ್ಷದಲ್ಲಿ ನಾವು ಏನು ಸಾಧಿಸಿದ್ದೇವೆ ಎಂದು ಪಕ್ಷಿನೋಟ ಬೀರಲು ಇದೊಂದು ಸುಗಮಕಾಲ . ಮುಂದೆ ಏನು ಮಾಡಬೇಕೆಂದು ಯೋಚಿಸಲು ಕೂಡಾ. ಇಡೀ ಭಾರತ ಪ್ರಕಾಶಿಸುತ್ತಿದೆ ಎಂದು ನಾವು ಎದೆತಟ್ಟಿ ಕೂಗಾಡುತ್ತಿರುವಾಗ, ಅಂಕೆಯಿಲ್ಲದ ನಾಲಗೆ, ಜೀವಂತಿಕೆಯಿಲ್ಲದ ಮುಖ , ಅಂತರಾತ್ಮ ವಿಲ್ಲದ ದೇಹ, ನಾಚಿಕೆಯಿಲ್ಲದ ಮನೋಭಾವ ಹೊತ್ತ ಕಳಪೆ ಸಾಮಾಗ್ರಿ ಯಂತಿರುವ ರಾಜಕಾರಣಿಗಳು ಮಾಡುವ ಅನಾಚಾರ ವನ್ನು ಕಂಡು ರೋಸಿಹೋಗುತ್ತಿದ್ದೇವೆ. ೧೨೦ ಕೋಟಿ ಜನರನ್ನು ಕೋಡಂಗಿ ಗಳಾಗಿಸುತ್ತಾ , ಬಹುಕೋಟಿ ಜನರ ತಾಳ್ಮೆಯ ಮೇಲೆ ಕುಣಿದಾಡುವ ಇವರಿಗೆ ಈ ಧೈರ್ಯ ಕೊಟ್ಟವರಾರು? ನಾವು ತಾನೇ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಆಟ ಎಂದಿಗೂ ನಮ್ಮ ರಾಜ ಆಗಲು ಸಾಧ್ಯವಿಲ್ಲ. ನಮ್ಮನು ಬೇಕಾಬಿಟ್ಟಿ ಕುಣಿಸಲು ಸಾಧ್ಯವಿಲ್ಲ. ಆದರೆ ಮಾಡೋದು ಏನು.ಅವರ ಕೃಪಾಕಟಾಕ್ಷ ಇಲ್ಲದೆ ಹುಲ್ಲು ಕಡ್ಡಿ ಮುಂದೆ ಸಾಗದ ಪರಿಸ್ತಿತಿ ನಿರ್ಮಾಣ ವಾಗಿದೆ.
ಅಮೇರಿಕ , ಚೀನಾ ಸೇರಿದಂತೆ ದೊಡ್ಡ ರಾಷ್ಟ್ರಗಳು ನಮ್ಮ ನಾಯಕತ್ವವನ್ನು ಒಪ್ಪಿ ವಿಶ್ವ ಸಮುದಾಯದಲ್ಲಿ , ನಮಗೊಂದು ಸ್ಥಾನ ನೀಡಲು ಉತ್ಸುಕರಾಗಿರುವಾಗ ನಾವು ಹಗರಣಗಳ ಸರಮಾಲೆಯನ್ನು ಧರಿಸುತ್ತಾ , ಕೆಲವರು ಹೇಳಿದ ಪುಂಗಿ ಮಾತುಗಳನ್ನೇ ನೆಕ್ಕಿ ಸಭೆ ಸಮಾರಂಭಗಳಲ್ಲಿ ಕಕ್ಕಿ ಚಪ್ಪಾಳೆ ಗಿಟ್ಟಿಸಿ ಅದನ್ನೇ ಬೆಳಗಿಸುವ ಮಾದ್ಯಮಗಳ ಮುಖಪುಟದಲ್ಲಿ ನಗುಮಿಕದ ಚಿತ್ರ ದೊಂದಿಗೆ ನ ಯಕ್ಕ ರಾಗುತ್ತಿದ್ದೇವೆ. ಅಂಥವರ ಹುಳುಕುಗಳನ್ನು ಬರೆದು ಪ್ರಜಾಪ್ರಭುತ್ವದ ಮಾನ ಕಾಪಾಡಲು ಪಣ ತೊಟ್ಟವರೂ ಕೂಡಾ ಮಣ್ಣು ಹೊನ್ನಿನ ರಾಶಿಯಲ್ಲಿ ಮಾಯವಾಗಿದ್ದಾರೆ.
ಇರಲಿ. ಇಂಥವರೇ ಭಾರತವಲ್ಲ; ವಿಶ್ವವೂ ಅಲ್ಲ. ಅಲ್ಲಿ ಮತ್ತೆ ಕೋಟ್ಯಾಂತರ ಮಂದಿ ಉತ್ತಮ ಚಿಂತಕರಿದ್ದಾರೆ; ಯೋಚನೆಮಾದುವವರಿದ್ದಾರೆ. ಯಾರೋ ಏನೋ ಮಾಡಿದ್ದಾರೆ ಎಂದು ಅವರ ಬಾಲ ಹಿಡಿಯುವುದು ಬೇಡ. ೨೦೧೦ ಹಗರಣಗಳ ವರ್ಷವಾದರೆ ೨೦೧೧ ಸಾಧನೆಯ ವರ್ಷವಾಗಲೀ. ಭಾರತದ ಮೇಲಿರುವ ವಿಶ್ವದ ಭರವಸೆ ನನಸಾಗಲು ನಾವೆಲ್ಲಾ ಪ್ರಯತ್ನಿಸೋಣ. ಅದಕ್ಕೆ ಈ ಕಳಪೆ ಸಾಮಾಗ್ರಿ ಬೇಡ. ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲ ನಮ್ಮಲಿದೆ.